Monday, April 9, 2012


ಉಲ್ಲಾಸ್ ಕಾರಂತರು ಪದ್ಮಶ್ರಿ ಮತ್ತು ಹುಲಿ

ಮೊನ್ನೆ ಪದ್ಮಶ್ರಿ ಪ್ರಶಸ್ತಿಯನ್ನ ಸ್ವೀಕರಿಸಲು ದೆಹಲಿಗೆಬಂದಿದ್ದ ಉಲ್ಲಾಸ್ ಕಾರಂತರ ಜೊತೆ ದೆಹಲಿ ಕರ್ನಾಟಕ ನಂಘವು ಸಂವಾದವನ್ನೆರ್ಪಡಿಸಿತ್ತು.ಬರೊಬ್ಬರಿ ಮೂರುವರ್ಷಗಳ ನಂತರ ಕಾರಂತರ ಮಾತು ಕೇಳುವ ಅವಕಾಶಸಿಕ್ಕಿತು.ಮೊದಲು ಕಾರಂತರ ಮಾತು ಕೆಳಿದ್ದು ಬೆಂಗಳೂರಿನ ಜೆ ಎಸ್ ಎಸ್ ಕಲೆಜಿನ ಸಭಾಂಗಣದಲ್ಲಿ.ಹೈಸ್ಕೂಲಿನದಿನಗಳಲ್ಲಿ ಓದಿದ ತೇಜಸ್ವಿ,ನಾಗೇಶ ಹೆಗಡೆಯವರ ಗಳಿಂದಾಗಿ ಪರಿಸರವೆಂಬ ವಿಷಯ ನಮ್ಮ ಮನಸ್ಸಿನಲ್ಲಿ ಒಂದು ಮಧುರಕಲ್ಪನೆಯಾಗಿ ಬೇರೂರಿತೆ ಹೊರತು ಅದರ ಆಳ ಅಗಲಗಳು ಅರ್ಥವಾಗಿರಲಿಲ್ಲ. ಪದವಿಯಲ್ಲಿ ಪರಿಸರವಿಜ್ಞಾನವನ್ನ ಓದಲು ಆಯ್ದುಕೊಂಡಾಗ ಆದದ್ದು ಭ್ರಮನಿರಸನ.ಕ್ಲಾಸಿನಲ್ಲಿ ಕಲಿಸುವ ಸಂಖ್ಯಾಶಾಸ್ತ್ರವಗಲಿ, ಭೂಗರ್ಭಶಾಸ್ತ್ರವಾಗಲಿ, ಅರ್ಥಶಾಸ್ತ್ರವಾಗಲಿ ಪರಿಸರಸಂರಕ್ಷಣೆಗೆ ಹೇಗೆಸಹಾಯವಾಗುತ್ತದೆಯೆಂದು ತಿಳಿಯುತ್ತಿರಲಿಲ್ಲ.ಆಲ್ಲಿಯವರೆಗೆ ಪರಿಸರರಕ್ಷಣೆಗೆ ಗಾಂಧಿವಾದವೊಂದೆಸಾಕು ಎಂದು ನಂಬಿಕೊಂಡಿದ್ದವ ನಾನು.

ಪದವಿಯಲ್ಲಿ ಓದುತ್ತಿದ್ದಾಗ ಕಾರಂತರ ವನ್ಯಜೇವಿ ಸಂರಕ್ಷಣಾ ಸಂಸ್ಥೆಯ ಸಂಪರ್ಕವುಂಟಾಗಿ ಹೊಸಜಗತ್ತೇ ತೆರೆದುಕೊಂಡಿತು.ಕಾಡುಮೇಡುಗಳಲ್ಲಿ ಅಲೆಯುತ್ತ, ಹುಲಿ ಚಿರತೆಗಳ ಹೆಜ್ಜೆಗುರುತುಗಳನ್ನಹುಡುಕುತ್ತ,ಸಾಕ್ಷಚಿತ್ರಗಳನ್ನ ನೂಡುತ್ತ ಮತ್ತು ಗಂಟೆಗಟ್ಟಲೆ ಚರ್ಚಿಸುತ್ತ ಪರಿಸರಸಂರಕ್ಷಣೆ ಎಂಬುದು ನಾವು ತಿಳಿದುಕೊಂಡಷ್ಟು ಸರಳವಾದುದ್ದಲ್ಲವೆಂಬ ಜ್ಞಾನೋದಯವಾಯ್ತು. ಜಗತ್ತಿನಲ್ಲಿ ನಾನು ಏನನ್ನ ತಿನ್ನಬೇಕು,ಬೆಳೆಯಬೇಕು,ತೊಡಬೇಕು ಎನ್ನುವುದರಿಂದ ಹಿಡಿದು ಎಲ್ಲಿ ಗಣಿಗಾರಿಕೆ ನೆಡೆಸಬೇಕು,ಆಣೆಕಟ್ಟುನಿರ್ಮಿಸಬೇಕು ಎಂಬುದರವರೆಗೆ ಎಲ್ಲವನ್ನೂ ಮಾರುಕಟ್ಟೆ ನಿಯಂತ್ರಿಸುತ್ತದೆ.ಗಾಂಧಿವಾದ ಮಾರುಕಟ್ಟೆಗೆ ಅರ್ಥವಗುವುದಿಲ್ಲ ಆದುದರಿಂದ ಮಾರುಕಟ್ಟೆಗೆ ಅರ್ಥವಾಗುವ ಹೊಸಭಾಷೆಯನ್ನ ಕಾರಂತರಂತವರು ಬೇರೆ ಬೇರೆ ಜ್ಞಾನಶಾಖೆಗಳನ್ನ ಉಪಯೋಗಿಸಿಕೊಂಡು ಸೃಷ್ಟಿಸಬೆಕಾಗುತ್ತದೆ. ಒಂದು ಜೀವಂತ ಹುಲಿಯೊ, ಆನೆಯೊ ಅಥವಾ ಅವುಗಳ ಆವಾಸಸ್ಥಾನ ಎಲ್ಲ ಆಣೆಕಟ್ಟುಗಳಿಗಿಂತ,ಕೈಗರಿಕಾಸಂಕೀರ್ಣಗಳಿಗಿಂತ ಮತ್ತು ವಿಶೇಷ ಆರ್ಥಿಕವಲಯಗಳಿಗಿಂತ ಹೇಗೆ ಹೆಚ್ಚು ಬೆಲೆಬಾಳುವಂತಹುದು ಎಂಬುದನ್ನ ಲೆಕ್ಕಾಚಾರಹಾಕಿ ತೋರಿಸಬೆಕಾಗುತ್ತದೆ.

ಒಂದರ್ಥದಲ್ಲಿ ಕಾರಂತರು ಗಾಂಧಿವಾದವನ್ನು ಬೇರೆತರಹದಲ್ಲಿ ಹೇಳುತ್ತಿದ್ದಾರೆ.ಮನುಷ್ಯಕೇಂದ್ರಿತವಾದ ಜಗತ್ತಿನಲ್ಲಿ ಗಣಿಗಾರಿಕೆ ಇಲ್ಲವೆ ಜಲವಿಧ್ಯುತ್ ಸ್ಥಾವರಗಳ ಬದಲಾಗಿ ಹುಲಿಸಂರಕ್ಷಣೆ ಮಾಡಿದರೆ ಅದರಿಂದ ಜನರಿಗೇನು ಪ್ರಯೋಜವೆಂಬ ಪ್ರಶ್ನೆ ಉಧ್ಬವಿಸುತ್ತದೆ ಆದರೆ ನಮ್ಮದೇಶದ ಎಲ್ಲ ಪ್ರಮುಖ ನದಿಗಳ ಉಗಮಸ್ಥಾನ ಮತ್ತು ನೀರಿನ ಆಕರ ಕಾಡು.ವನ್ಯಜೀವಿಗಳ ವಿನಾಶದಿಂದ ಉಂಟಾಗುವ ಪರಿಸರವ್ಯವಸ್ಥೆಯಲ್ಲಿನ ಅಸಮತೋಲನದಿಂದ ಕಾಡು ನಾಶವಗಿ ನದಿಗನೀರಿನ ಸೆಲೆಯೇ ಬತ್ತಿಹೊಗುತ್ತದೆ.ಎಂಬ ಸತ್ಯ ನಮಗೆ ಅರ್ಥವಾಗುವುದಿಲ್ಲ

ದೇಶದ  ಅಭಿವೃದ್ಧಿಯನೆಪದಲ್ಲಿ ಕಾನೂನುಗಳನ್ನೆಲ್ಲಾ  ಗಾಳಿಗೆತೂರಿ ನೈಸರ್ಗಿಕ ಸಂಪತ್ತನ್ನೆಲ್ಲ ಕೊಳ್ಳೆಹೊಡಿಯುವ ಸರ್ಕಾರ ಕಾರಂತರಂತವರಿಗೆ ಪ್ರಶಸ್ತಿನೀಡಿ ತನ್ನತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತದೆ.

Sunday, July 3, 2011

Monsoon Memories


(Two years ago I have written this article in bad English for my English assignment. That time i was in Bangalore. Now I am in my village doing field work for my internship. Again it is raining heavily here. )

   I read a report in a newspaper, heading saying that "Heavy Rains in Uttara Kannada District". I was very curious to know how much water was flowing in Kokkar Streem and Bedti River. So I immediately called on my house but I heard a voice saying "the number you have called is under repair". I tried again and heard the same voice. This is very common in Malnad area. Most of the time during this season there is no electricity and the phones do not work because of trees falls that damage the electrical and phone poles.

I loved it when there was no electricity in the night during the rainy season because my parents won't force me to do home work or read text book. I could sit front of hodtki with my grandfather--hodtki is a type of dryer used for drying coarse rug. He always tells me a lot of stories there most of them are very interesting especially Brahma Rakshasa story, Punyakoti stories, a few ghost stories, and stories from Ramayana and Mahabharata. In the bonfire of the hodtki, we used to bake jackfruit seeds. My grandfather used to hole the seeds and then put it in the fire otherwise it would burst in the heat. When it is raining a lot it is a very joyful moment sitting in front of the fire of the hodtke enjoying the baked jackfruit seed, jackfruit papad and cashew nut. The process of baking cashew in the fire is very intresting.While baking the cashew nut, it gives very beautiful scattered flames and different crackling sounds. Sometimes it sprays the hot oil with fire.

Early in the morning from 6 o' clock my mother starts waking me up because I have to walk 3 kilometres to reach the school. Finally I get of the bed only after 15-20 minutes. After leaving the bed my first work was watching the sky to see if it is cloudy or not and then to the news on AIR Dharvad if they announce the possibility of heavy rains in Uttara Kannada district within 24 hours and celebrate as my father would says no need to go to school today.

During the school days Mahadeva was my close friend. He was very good at catching fish (i.e. without any tools). Every Saturday afternoon and Sunday we used to go catch fish and crabs and also play in the slush of paddy fields. I was not able to catching even single fish but Mahadeva was catching the fish and crab so easily. he put his hand in a deep hole upto his elbow to catch crab. Once a big crab almost a palmsized cut his fingertip.

During the rainy season Mahadeva and me used build mud dams to small channels of water within an hour it collapses and we enjoyed the seeing of it collapsing and a huge amount of water flowing out of it. We used to imagine this as stories where LTTE terrorist attacking dams and demolish them. (i used to read in newspaper that govt was giving protection to Supa Dam from LTTE).

We used to make paper boats and used to put red ants on the boat and leave the boats on the streems. The ants were moving here and there on the boat searching for way to escape from the floating paper boat. Some jumped into the water and started to swimming and few climbed on to the blades of grass partially touching the stream water.

On the way to school we used to see lots of dead snakes, frogs and millipads on the tar roads. During the time of crossing the roads those animals are dying due to the vehicles which are moving on them. Those fresh decaying flesh of those beings mixed with water give a smell resembling the smell of iron rods of KSRTC bus seats. Green vine snakes are common during the rainy season. We used to catch them bare hands and thrown them on some plants on the way to home after the school. We used to take the forest route in search of wild mushrooms.

In the forest we find a lot of differently coloured and different types of mushrooms. Mahadeva told me that only 2 types of mushrooms are edible and rest are poisonous.

Now again monsoon is started, water from the new rains are flowing in Kokkar Streem and bedti river. A new vine snake waiting for a new frog. My grandfather is putting new firewood to hodtki fire. New rain-water is evaporating from the coarse rug. A new crab making new hole in paddy field. it is raining even in Bangalore. But it is not a new rain, it looks like last year's rain and the year before the last. Without the smell of fresh soil, without the cool soil slush, without vine snake, without the frogs song, without hodtki fire and jackfruit seed, how can it be new? Then why am I living in Bangalore? I don't know and I don't have an answer.

Sunday, October 10, 2010

                                                 ಒ೦ದು ಹಕ್ಕಿಯ ಕತೆ


ರಾತ್ರಿಯಿಡೀ ಸುರಿದಿದ್ದ ಮಳೆ ಬೆಳಿಗ್ಗೆಯೂ ಹನಿಯುತ್ತಿತ್ತು. ಇನ್ನೂ ಪೂರ್ತಿಕರಗದ ಕತ್ತಲು, ವಾಕಿ೦ಗ್ ಹೊಗಲೋ ಬೇಡವೊ ಎಂಬ ಗೊ೦ದಲದಲ್ಲೇ ಕೊಡೆ ಬಿಡಿಸಿ ರಸ್ತೆಗಿಳಿದೆಚುಮು ಚುಮು ಮು೦ಜಾನೆ ತೆಳುವಾದ ಮಳೆಯ ಪರದೆ ಹರಡಿತ್ತು.ಎಲೆಗಳಿ೦ದ ತೊಟ್ಟಿಕ್ಕುತ್ತಿದ್ದ ಗಜಗಾತ್ರದ ಹನಿಗಳು ಬಿಡಿಸಿ ಹಿಡಿದಿದ್ದ ಕೊಡೆಯಮೇಲೇ ಬೀಳುತ್ತ ಹೊರಡಿಸುತ್ತಿದ್ದ ಸದ್ದು ಜೀರು೦ಡೆಗಳ ಸ೦ಗೀತಕ್ಕೆ ಸಾಥ್ ನೀಡಿದ೦ತಿತ್ತು. ದಟ್ಟ ಹಸಿರಿನ ಮಧ್ಯೆ ಒಬ್ಬ೦ಟಿಯಾಗಿ ಹಸಿರಿನಲ್ಲೇ ಕರಗಿಹೋದ೦ತೆ ನೆಡೆಯುತ್ತಿದ್ದವನಿಗೆ ಏನೋ ವಿಶಿಷ್ಟ ಧ್ವನಿ ಕೇಳಿದ೦ತಾಗಿ ನಿ೦ತೆ.ಹಿ೦ದೆ೦ದೂ ಕೇಳಿರ ಧ್ವನಿ ಯವುದೊ ಹಕ್ಕಿಯದೊ, ಇಲ್ಲ ಸಣ್ಣ ಪ್ರಾಣಿಯದೋ ಧ್ವ್ನನಿಯಿರಬೇಕೆ೦ದು ಸುತ್ತಲಿನ ಮರಗಳ ಮೇಲೆ ಒ೦ದುಸಲ ಕಣ್ಣುಹಯಿಸಿದಾಗ ಕ೦ಡಿದ್ದು ಮಲಭಾರ್ ಟ್ರೋಜನ್ ಹಕ್ಕಿ. ಆಹಾ ಅದೆ೦ತಹ ರೋಮಾ೦ಚನ! ಅನ೦ತ ದಟ್ಟ ಹಸಿರಿನ ನಡುವೆಯೂ ನಮ್ಮ ಇಡೀ ಮನಸ್ಸನ್ನು ಆವರಿಸಿಬಿಡುವ ಮೌನ ಸು೦ದರಿಯ ಅಚ್ಹ ಕಿತ್ತಳೆ ಬಣ್ಣದ ಹೊಟ್ಟೆ, ಮೇಲೆ ಕತ್ತಿನಲ್ಲಿ ಒ೦ದು ಬಿಳಿಯ ಬಳೆ, ತಲೆ ಕಡುಗಪ್ಪು. ಹಕ್ಕಿಯನ್ನ ಮೌನಸು೦ದರಿಯ೦ದು ಯಾಕೆ ಕರೆದನೆ೦ದರೆ ಅದು ಕೂಗುವುದೇಕಡಿಮೆ ಕೂಗಿದರೂ ತನ್ನೊಳಗಿನ ತನಗಾಗಿ ಎ೦ಬ೦ತೆ, ಅದರ ಧ್ವನಿ ಅಸ್ಟು ಕ್ಷಿಣ.
                                                           ಸು೦ದರಿಯಬಗ್ಗೆ ಮೊದಲು ಓದಿದ್ದು ನನ್ನ ಹೈಸ್ಕೂಲ್ ದಿನಗಳಲ್ಲಿ ತೇಜಸ್ವಿಯವರ ಕನ್ನಡ ನಾಡಿನ ಹಕ್ಕಿಗಳು ಯೆ೦ಬ ಪುಸ್ತಕದಲ್ಲಿ. ಆಗ ನನಗೆ ಮತ್ತು ಗೆಳೆಯರಿಗೆಲ್ಲ ತೇಜಸ್ವಿಯವರ ಅಮಲು ಹತ್ತಿತ್ತು.ತೆಜಸ್ವಿ ನಮ್ಮೆಲ್ಲರ ಆರಾಧ್ಯದೈವ ರಾತ್ರಿಯೆಲ್ಲಾ ಕೂತು ಮಹಾಪಲಾಯನ ಓದಿಮುಗಿಸಿದ್ದ. ಕಾಡಿನ ನಡುವಿನ ದಾರಿಯಲ್ಲಿ ಶಾಲೆಗೆ ಹೋಗಬೇಕದರೆ ಎಾಲ್ಲಾದರೂ ತರಗೆಲೆಗಳ ಸರಬರ ಸದ್ದು ಕೇಳಿದರೂ, ಹಿ೦ದಿನರಾತ್ರಿ ಓದಿದ  ನರಭಕ್ಶಕಗಳ ಕತೆ ನೆನಪಾಗಿ, ಮನಸ್ಸು ಬೆಚ್ಹಿ, ಕಾಲುಗಳು ವೇಗವಾಗಿ ನೆಡೆಯತೊಡಗುತ್ತಿದ್ದವು.
                                                                                                                   ಪರಿಸರವೆ೦ದರೆ ಕೇವಲ ಕಾಡು, ಕಾಡೆ೦ದರೆ ಕೇವಲ ಮರಗಳೆ೦ದು ಪಠ್ಯ ಪುಸ್ತಕಗಳಲ್ಲಿ ಉರು ಹೊಡೆದಿದ್ದ ನಮಗೆ ತೇಜಸ್ವಿಯವರ ವೈಜ್ನಾನಿಕ ಬರಹಗಳು ಹೊಸಲೋಕಕ್ಕೆ ಕರೆದೊಯ್ದವು. ಟ್ರೊಜನ್ ಹಕ್ಕಿ ಮಳೆಕಾಡುಗಳಲ್ಲಿ ಮಾತ್ರ ಕಾಣುತ್ತದೆ೦ದೂ ಅದರ ಈಡೀ ಮೈ ಬಿಸಿಲಿಗೆ ಬೆ೦ಕಿಯು೦ಡೆಯ೦ತೆ ಹೊಳೆಯತ್ತದೆಯೆ೦ದು, ತೆಜಸ್ವಿ ಬರೆದ ನೆನಪು.
ತೇಜಸ್ವಿಯವರ humarus ಆದ ವಿವರಣೆಯನ್ನ ಓದಿದ ಮಹಾಬಲನಿಗೆ ಮತ್ತು ನನಗೆ, ಕ೦ಡ ಕ೦ಡ ಹಕ್ಕಿಗಳನ್ನೆಲ್ಲ ಇದು ಟ್ರೋಜನ್ ಇರಬಹುದೇ? ಎ೦ದು ನೋಡುವುದೆ ಒ೦ದು ಚಟವಾಗಿ ಹೋಯಿತು. ನೆಡೆಯುವಾಗಲೆಲ್ಲ ನೆಲನೋದುವುದಕ್ಕಿ೦ತ ಮರ ನೋದುವುದೇ ಹೆಚ್ಚಾದರೂ ಟ್ರೋಜನ್ ಮಾತ್ರ ಕಣಲೇಇಲ್ಲ. ಅಥವಾ ಹಕ್ಕಿಯ ಒ೦ದು photo ಕೂಡಾ ನಮ್ಮಲ್ಲಿಲ್ಲವಾದುದ್ದರಿ೦ದ ಸು೦ದರಿಯ ಗುರುತೇ ನಮಗೆ ಹತ್ತಲಿಲ್ಲವೇನೋ. puc ಸೇರಿದಮೇಲ೦ತೂ ಟೀಟಾ, ಕ್ಯಾಲ್ಕಿಲಸ್, ಥರ್ಮೊಡೈನಮಿಕ್ಸ್ ಗಳೆಲ್ಲ ಒಟ್ಟಿಗೆ ದಾಳಿಯಿಟ್ಟು ಹೈರಾಣಮಾಡಿ malbar Trojen ಯೆ೦ಬ ಚ೦ದದ ಹೆಸರೇ ಮರೆತು ಹೋಯ್ತು.ಮತ್ತೆ ನೆನಪಾದದ್ದು ಎರಡು ವರುಶಗಳನ೦ತರ, ಶೆಶಾದ್ರಿ ಕೈಯಲ್ಲಿದ್ದ, ಸಲಿ೦ ಅಲಿ ಬರೆದ BIRDS OF INDIAN SUBCONTINENT ಎ೦ಬ ಪುಸ್ತಕ ನೋದಿದಾಗ.
                                                                 ಚಿತ್ರಕಲಾ ಪರಿಶತ್ತಿನಲ್ಲಿ ನೆಡೆದ ತೆಜಸ್ವಿಯವರ photo exibution ನೋಡಿ ಅವರ photo ಗಳಿಗೆ ಮರುಳಾಗಿ, ಅಲ್ಲೆ ಅವರ ಅಟೊಗ್ರಪ್ ತೆಗೆದುಕೊ೦ಡು, ಕತ್ತಿಗೆ ಬೈನಾಕ್ಯುಲರ್ ಸಿಕ್ಕಿಸಿಕೊ೦ಡು,ಹೆಗಲಿಗೇರಿಸಿದ wild craft ಬ್ಯಾಗಿನಲ್ಲಿ ಒ೦ದು ನೀರಿನ ಬಾಟ್ಲಿ ಇಟ್ಟುಕೊ೦ಡು ಲಾಲ್ ಭಾಗಗೆ ಪಕ್ಶಿವೀಕ್ಶಣೆಗೆ  ಹೋದವನು ಶೇಶಾದ್ರಿ ಪದವಿಯಲ್ಲಿ ಅವನ ಸಹಪಾಠಿಯದದ್ದು ನನ್ನ ಅದ್ರುಷ್ಟ.ಒ೦ದು ಬೇಸಿಗೆಯ ರಜದಲ್ಲಿ ಅವನನ್ನ ನಮ್ಮೂರಿಗೆ ಕರೆತ೦ದು ಟ್ರೋಜನ್ ಹಕ್ಕಿ ಹುಡುಕೋಣ ಬಾ ಮರಾಯ ಎ೦ದೆ.ಬಹಳ ಉತ್ಸಾಹದಿ೦ದಲೇ ಉಡ್ ಲ್ಯಾ೦ಡ ಶೂ ಹಾಕಿಕೊ೦ಡು, ಉಣುಗು ಉ೦ಬಳ ಏನೂ ಕಚ್ಚಬಾರದೆ೦ದು ಮೇಲೊ೦ದು ಟಿಕ್ ಸಾಕ್ಸ್ ಕಟ್ಟಿಕೊ೦ಡು ಒ೦ದು ಮಹಾನ್ವೇಶಣೆಗೆ ಅಣಿಯಾದ ಶೇಶಾದ್ರಿ.ಬೇಡ್ತಿ ನದಿಯವರೆಗೆ ಬಸ್ಸಿನಲ್ಲಿ ಹೋಗಿ ಅಲ್ಲಿ೦ದ ನಮ್ಮ ಮನೆಯವರೆಗೆ, ಸುಮಾರು ಹತ್ತು ಕಿಲೋಮೀಟರ್ ನೆಡೆಯಬೇಕೆ೦ದು ನಿರ್ಧರಿಸಿ ಅಲ್ಲಿ೦ದ ನಮ್ಮ ಅನ್ವೇಶಣೆ ಆರ೦ಭಿಸಿದೆವು.ಬೆಳಿಗ್ಗೆಯಿ೦ದ ಸ೦ಜೆಯವರೆಗೆ ಅಲೆದರೂ ಟ್ರೋಜನ್ ಹಕ್ಕಿ ಮಾತ್ರ ಕಣ್ಣಿಗೆ ಬೀಳಲೇಇಲ್ಲ.
                                                                                                               ಮರುದಿನ ಇಬ್ಬರಿಗೂ ಕಾಲು ತು೦ಬಾನೊಯುತ್ತಿದ್ದರಿ೦ದ ಅನ್ವೇಶಣೆಯನ್ನ ಅಲ್ಲಿಗೆಬಿಟ್ಟು ಮನೆಯಲ್ಲೆ ಕುಳಿತೆವು.ಆದರೂ ಮನಸ್ಸು ಕೇಳದೆ ಸಾಯ೦ಕಾಲ ನಾಲ್ಕುಗ೦ಟೆಯ ಹೊತ್ತಿಗೆ ಶೇಶಾದ್ರಿಗೆ ಹಾವನ್ನ ಹಿಡಿಯುವ ಅಧಮ್ಯ ಉತ್ಸಾಹವು೦ಟಾಗಿ ತೋಟದ ಭಾವಿಯಬಳಿ ಹೋದೆವು.ಅದು ನೆಲಮಟ್ಟದಲ್ಲಿ ನೀರಿರುವ ಕಲ್ಲು ಕಟ್ಟಿದ ಭಾವಿ. ಕಲ್ಲಿನಪೊಡಕಿನಲ್ಲಿ ಇಡೀ ದೇಹವನ್ನು ತೂರಿಕೊ೦ಡು ತಲೆಯನ್ನಷ್ಟೆ ಹೊರಹಾಕಿ ನಾಲಿಗೆಯನ್ನಾಡಿಸುತ್ತಿದ್ದ ಎರಡು ನೀರುಳ್ಳೆಹಾವುಗಳನ್ನ ಮೇಲೆತ್ತಬೇಕೆ೦ದು ಕೋಲು ಕೊಕ್ಕೆ ಹಿಡಿದುಕೋ೦ಡು ಸರ್ಕಸ್ ಮಾಡಿ ಹಾವನ್ನ್ ನೀರಿನಿ೦ದೆತ್ತಲಾಗದೆ ಸೋತು ಎದುರುಸಿರು ಬಿಡುತ್ತ ಕೂತಿದ್ದೆವು.ಪಶ್ಚಿಮದ ಬಿಸಿಲಿಗೆ ಮೈಯೊಡ್ಡಿದ್ದ ಅಡಿಕೆ ಎಲೆಗಳು ಸಣ್ಣಗೆ ಗಾಳಿ ಬೀಸಿದಾಗ ಪುಳಕಗೊ೦ಡು ಮಿರುಗುತ್ತಿದ್ದವು.
                                                                                                                                                ಅತ್ತ ಟ್ರೊಜನ್ ಹಕ್ಕಿಯ ದರ್ಶನವೂ ಆಗದೆ, ಇತ್ತ ಹಾವನ್ನ ಕೈಯಲ್ಲಿ ಹಿಡಿದು ಪೋಸ್ ಕೊಟ್ಟು photo ತೆಗೆಸಿಕೊಳ್ಳಲೂ ಆಗದೆ, ಒ೦ದು ಮಾನಸಿಕ ಅಸ್ವಸ್ಥ್ನ೦ತಾಗಿದ್ದ ಶೇಶಾದ್ರಿ ನಮ್ಮೂರಿನ ಕಾಡನ್ನೂ, ಕಾಡುಕಡಿದು ತೋಟಮಡಿದವರನ್ನೂ ಒ೦ದೆ ಸಮನೆ ಬಯ್ಯುತ್ತ, ಬೆ೦ಗಳೂರಿಗೆ ಹೋಗಲು ಅಣಿಯಾದ.ಇವೆಲ್ಲದರ ಮಧ್ಯೆ ಬೆ೦ಗಳೂರಿನ ಏಸಿ ರೂಮಿನಲ್ಲಿ ಕೇಳಿದ ಯಾವುದೊ ಸೆಮಿನಾರಿನ ನೆನಪಾಗಿ, ನಿಮ್ಮೂರಿನ ಕಾಡಿನಲ್ಲಿ ಮಲಭಾರ್ ಟ್ರೋಗನ್ ಹಕ್ಕಿ ಇರಲು ಸಾಧ್ಯವೇ ಇಲ್ಲವೆ೦ದು ತರ್ಕಭದ್ದವಾಗಿ ಒ೦ದಷ್ಟು ಇಕಾಲಜಿ ಪಾಠಮಾಡತೊಡಗಿದ.ಒ೦ದುಕೈಯ್ಯಲ್ಲಿ ಸಲಿ೦ಅಲಿಯವರ ಅರ್ಧ ಕೇಜಿ ಭಾರದ ಪುಸ್ತಕ, ಇನ್ನೊ೦ದು ಕಯ್ಯಲ್ಲಿ ಒ೦ದು ಕೇಜಿ ಭಾರದ ಬೈನಾಕ್ಯುಲರ್,ಕಾಲುಗಳಲ್ಲೆರಡು ಮಣಭಾರದ ವುಡ್ ಲ್ಯಾ೦ಡ್ ಶೊ ಗಳನ್ನ ಹೊತ್ತಿದ್ದ ಶೇಶಾದ್ರಿಯನ್ನ ನೋಡಿದ ನನಗೆ ಅವನ ತರ್ಕದ ತೂಕದ ಬಗ್ಗೆ ಅಪಾರವಾದ ವಿಶ್ವಾಸವು೦ಟಾಗಿ ಗೋಣುಅಲ್ಲಾಡಿಸುತ್ತ ಅವನಹಿ೦ದೆಯೆ ನೆಡೆಯತೊಡಗಿದೆ. ಶೇಶಾದ್ರಿಯ ಪಾಠ ಮು೦ದುವರೆದಿತ್ತು ನಾನು ಗೋಣುಅಲ್ಲಾಡಿಸುತ್ತಲೇ ಇದ್ದೆ.ನೋಡ ನೋಡುತ್ತಿದ್ದ೦ತೆಯೆ  ಪಶ್ಚಿಮದ ಬಿಸಿಲಿಗೆ ಬೆ೦ಕಿಯು೦ಡೆಯ೦ತೆ ಮಿರ ಮಿರನೆ ಮಿ೦ಚುತ್ತಿದ್ದ ಹಕ್ಕಿಯೊ೦ದು ಹಾರಿಬ೦ದು ಮನೆಯ ಎದುರಿನ ಮಾವಿನ ಮರದ ಮೇಲೆ ಕುಳಿತುಕೊ೦ಡಿತು.ಸೋಡಾಗ್ಲಸಿನ ದಪ್ಪಕನ್ನಡಕವನ್ನ ತೆಗೆದು ನನ್ನ ಕೈಗಿತ್ತು, ಬೈನಾಕ್ಯುಲರನ್ನು ಕಣ್ಣಿಗಿಟ್ಟುಕೊ೦ಡು ಮಲಭಾರ್ ಟ್ರೋಜನ್ ಯೆ೦ದು ಸಣ್ಣಗೆ ಉಸುರಿದ ಶೇಶಾದ್ರಿ.