Monday, April 9, 2012


ಉಲ್ಲಾಸ್ ಕಾರಂತರು ಪದ್ಮಶ್ರಿ ಮತ್ತು ಹುಲಿ

ಮೊನ್ನೆ ಪದ್ಮಶ್ರಿ ಪ್ರಶಸ್ತಿಯನ್ನ ಸ್ವೀಕರಿಸಲು ದೆಹಲಿಗೆಬಂದಿದ್ದ ಉಲ್ಲಾಸ್ ಕಾರಂತರ ಜೊತೆ ದೆಹಲಿ ಕರ್ನಾಟಕ ನಂಘವು ಸಂವಾದವನ್ನೆರ್ಪಡಿಸಿತ್ತು.ಬರೊಬ್ಬರಿ ಮೂರುವರ್ಷಗಳ ನಂತರ ಕಾರಂತರ ಮಾತು ಕೇಳುವ ಅವಕಾಶಸಿಕ್ಕಿತು.ಮೊದಲು ಕಾರಂತರ ಮಾತು ಕೆಳಿದ್ದು ಬೆಂಗಳೂರಿನ ಜೆ ಎಸ್ ಎಸ್ ಕಲೆಜಿನ ಸಭಾಂಗಣದಲ್ಲಿ.ಹೈಸ್ಕೂಲಿನದಿನಗಳಲ್ಲಿ ಓದಿದ ತೇಜಸ್ವಿ,ನಾಗೇಶ ಹೆಗಡೆಯವರ ಗಳಿಂದಾಗಿ ಪರಿಸರವೆಂಬ ವಿಷಯ ನಮ್ಮ ಮನಸ್ಸಿನಲ್ಲಿ ಒಂದು ಮಧುರಕಲ್ಪನೆಯಾಗಿ ಬೇರೂರಿತೆ ಹೊರತು ಅದರ ಆಳ ಅಗಲಗಳು ಅರ್ಥವಾಗಿರಲಿಲ್ಲ. ಪದವಿಯಲ್ಲಿ ಪರಿಸರವಿಜ್ಞಾನವನ್ನ ಓದಲು ಆಯ್ದುಕೊಂಡಾಗ ಆದದ್ದು ಭ್ರಮನಿರಸನ.ಕ್ಲಾಸಿನಲ್ಲಿ ಕಲಿಸುವ ಸಂಖ್ಯಾಶಾಸ್ತ್ರವಗಲಿ, ಭೂಗರ್ಭಶಾಸ್ತ್ರವಾಗಲಿ, ಅರ್ಥಶಾಸ್ತ್ರವಾಗಲಿ ಪರಿಸರಸಂರಕ್ಷಣೆಗೆ ಹೇಗೆಸಹಾಯವಾಗುತ್ತದೆಯೆಂದು ತಿಳಿಯುತ್ತಿರಲಿಲ್ಲ.ಆಲ್ಲಿಯವರೆಗೆ ಪರಿಸರರಕ್ಷಣೆಗೆ ಗಾಂಧಿವಾದವೊಂದೆಸಾಕು ಎಂದು ನಂಬಿಕೊಂಡಿದ್ದವ ನಾನು.

ಪದವಿಯಲ್ಲಿ ಓದುತ್ತಿದ್ದಾಗ ಕಾರಂತರ ವನ್ಯಜೇವಿ ಸಂರಕ್ಷಣಾ ಸಂಸ್ಥೆಯ ಸಂಪರ್ಕವುಂಟಾಗಿ ಹೊಸಜಗತ್ತೇ ತೆರೆದುಕೊಂಡಿತು.ಕಾಡುಮೇಡುಗಳಲ್ಲಿ ಅಲೆಯುತ್ತ, ಹುಲಿ ಚಿರತೆಗಳ ಹೆಜ್ಜೆಗುರುತುಗಳನ್ನಹುಡುಕುತ್ತ,ಸಾಕ್ಷಚಿತ್ರಗಳನ್ನ ನೂಡುತ್ತ ಮತ್ತು ಗಂಟೆಗಟ್ಟಲೆ ಚರ್ಚಿಸುತ್ತ ಪರಿಸರಸಂರಕ್ಷಣೆ ಎಂಬುದು ನಾವು ತಿಳಿದುಕೊಂಡಷ್ಟು ಸರಳವಾದುದ್ದಲ್ಲವೆಂಬ ಜ್ಞಾನೋದಯವಾಯ್ತು. ಜಗತ್ತಿನಲ್ಲಿ ನಾನು ಏನನ್ನ ತಿನ್ನಬೇಕು,ಬೆಳೆಯಬೇಕು,ತೊಡಬೇಕು ಎನ್ನುವುದರಿಂದ ಹಿಡಿದು ಎಲ್ಲಿ ಗಣಿಗಾರಿಕೆ ನೆಡೆಸಬೇಕು,ಆಣೆಕಟ್ಟುನಿರ್ಮಿಸಬೇಕು ಎಂಬುದರವರೆಗೆ ಎಲ್ಲವನ್ನೂ ಮಾರುಕಟ್ಟೆ ನಿಯಂತ್ರಿಸುತ್ತದೆ.ಗಾಂಧಿವಾದ ಮಾರುಕಟ್ಟೆಗೆ ಅರ್ಥವಗುವುದಿಲ್ಲ ಆದುದರಿಂದ ಮಾರುಕಟ್ಟೆಗೆ ಅರ್ಥವಾಗುವ ಹೊಸಭಾಷೆಯನ್ನ ಕಾರಂತರಂತವರು ಬೇರೆ ಬೇರೆ ಜ್ಞಾನಶಾಖೆಗಳನ್ನ ಉಪಯೋಗಿಸಿಕೊಂಡು ಸೃಷ್ಟಿಸಬೆಕಾಗುತ್ತದೆ. ಒಂದು ಜೀವಂತ ಹುಲಿಯೊ, ಆನೆಯೊ ಅಥವಾ ಅವುಗಳ ಆವಾಸಸ್ಥಾನ ಎಲ್ಲ ಆಣೆಕಟ್ಟುಗಳಿಗಿಂತ,ಕೈಗರಿಕಾಸಂಕೀರ್ಣಗಳಿಗಿಂತ ಮತ್ತು ವಿಶೇಷ ಆರ್ಥಿಕವಲಯಗಳಿಗಿಂತ ಹೇಗೆ ಹೆಚ್ಚು ಬೆಲೆಬಾಳುವಂತಹುದು ಎಂಬುದನ್ನ ಲೆಕ್ಕಾಚಾರಹಾಕಿ ತೋರಿಸಬೆಕಾಗುತ್ತದೆ.

ಒಂದರ್ಥದಲ್ಲಿ ಕಾರಂತರು ಗಾಂಧಿವಾದವನ್ನು ಬೇರೆತರಹದಲ್ಲಿ ಹೇಳುತ್ತಿದ್ದಾರೆ.ಮನುಷ್ಯಕೇಂದ್ರಿತವಾದ ಜಗತ್ತಿನಲ್ಲಿ ಗಣಿಗಾರಿಕೆ ಇಲ್ಲವೆ ಜಲವಿಧ್ಯುತ್ ಸ್ಥಾವರಗಳ ಬದಲಾಗಿ ಹುಲಿಸಂರಕ್ಷಣೆ ಮಾಡಿದರೆ ಅದರಿಂದ ಜನರಿಗೇನು ಪ್ರಯೋಜವೆಂಬ ಪ್ರಶ್ನೆ ಉಧ್ಬವಿಸುತ್ತದೆ ಆದರೆ ನಮ್ಮದೇಶದ ಎಲ್ಲ ಪ್ರಮುಖ ನದಿಗಳ ಉಗಮಸ್ಥಾನ ಮತ್ತು ನೀರಿನ ಆಕರ ಕಾಡು.ವನ್ಯಜೀವಿಗಳ ವಿನಾಶದಿಂದ ಉಂಟಾಗುವ ಪರಿಸರವ್ಯವಸ್ಥೆಯಲ್ಲಿನ ಅಸಮತೋಲನದಿಂದ ಕಾಡು ನಾಶವಗಿ ನದಿಗನೀರಿನ ಸೆಲೆಯೇ ಬತ್ತಿಹೊಗುತ್ತದೆ.ಎಂಬ ಸತ್ಯ ನಮಗೆ ಅರ್ಥವಾಗುವುದಿಲ್ಲ

ದೇಶದ  ಅಭಿವೃದ್ಧಿಯನೆಪದಲ್ಲಿ ಕಾನೂನುಗಳನ್ನೆಲ್ಲಾ  ಗಾಳಿಗೆತೂರಿ ನೈಸರ್ಗಿಕ ಸಂಪತ್ತನ್ನೆಲ್ಲ ಕೊಳ್ಳೆಹೊಡಿಯುವ ಸರ್ಕಾರ ಕಾರಂತರಂತವರಿಗೆ ಪ್ರಶಸ್ತಿನೀಡಿ ತನ್ನತಪ್ಪನ್ನು ಮುಚ್ಚಿಕೊಳ್ಳಲು ಪ್ರಯತ್ನಿಸುತ್ತದೆ.